Activity

ಪ್ರಪಂಚ ಏನು? ನಾವು ಯಾರು? ನಮ್ಮ ಅಸ್ಥಿತ್ವ ಯಾಕೆ? ಯಾವತ್ತೂ ಉತ್ತರ ಕಂಡುಕೊಳ್ಳಲಾಗ ಪ್ರಶ್ನೆಗಳು ಅನಿಸುತ್ತವಲ್ಲವೇ?? ನನಗ್ಯಾವತ್ತೋ ಒಬ್ಬರು ಹೇಳಿದ್ದರು ’ಈ ಪ್ರಪಂಚ ಹುಟ್ಟಿದ್ದು ದೇವರ ತ್ಯಾಜ್ಯದಿಂದ’ ಎಂದು.. ಆ ದಿನವೇ ಅವರಿಗೊಂದು ಮನಸ್ಸಿನಲ್ಲಿಯೇ ’ನಮೋನಮಃ’ ಎಂದು ದೊಡ್ಡದಾಗಿ ನಮಸ್ಕಾರ ಹಾಕಿದ್ದೆ.. ಇದೇ ತರಹದ ತುಂಬಾ ವಿಚಾರಗಳನ್ನು ಕೇಳಿದ್ದೇನೆ.. ಹೀಗೇ ಕೇಳಿ ಕೇಳಿ ನಾನೂ ಕೂಡ ಒಂದು ಥಿಯರಿ ಬೆಳೆಸಿಕೊಂಡಿದ್ದೆ.. "ಜಗತ್ತೇ ಒಂದು computerಥರಾ, ಪ್ರಪಂಚದ ಪ್ರತಿಯೊಂದು ಕಣವೂ  computerನ ಒಂದೊಂದು transistorಇದ್ದ ಹಾಗೆ.. ಪ್ರತಿಯೊಂದು activityಯೂ ಒಂದೊಂದು instruction(of a process)ಇದ್ದ ಹಾಗೆ.. ನಾವೆಲ್ಲಾ ಸೇರಿ ಮೇಲುಗಡೆಯವನಿಗೆ ಯಾವುದೋ ಒಂದು ಕೆಲಸ ಮಾಡಿಕೊಡುತ್ತಿದ್ದೇವೆ" ಎಂದೆಲ್ಲಾ ಅಂದುಕೊಂಡಿದ್ದೆ... ಆದರೆ ಆ ದೇವರು ಯಾಕೆ ಅಸ್ಥಿತ್ವದಲ್ಲಿ ಇರಬೇಕು ಎಂಬುದಕ್ಕೆ ಕಾರಣ ಕೊಡಲಾಗದೇ ಹೋದೆ.. ಅವಲ್ಲಾ ಇರಲಿ ಬಿಡಿ.. ಇಲ್ಲಿ ನಾನು ಹೇಳಬಯಸಿರುವುದು activity ಬಗ್ಗೆ..
            activityಅನ್ನೋದು ಜೀವನದಲ್ಲಿ ಬಹಳ ಮುಖ್ಯವಾದ ಭಾಗ.. ನಿಮ್ಮ ದಿನನಿತ್ಯವೇ activity. ಅದು ಜಾಸ್ತಿಯೂ ಇರಬಾರದು - ತಲೆ ಕೆಟ್ಟು ಹೋಗುತ್ತದೆ, ಕಮ್ಮಿಯೂ ಇರಬಾರದು - ಬೋರ್ ಬಂದುಬಿಡುತ್ತದೆ.. ಸಮತೋಲನವಾಗಿರಬೇಕು... ಆದರೆ, ನನ್ನ ಪ್ರಕಾರ ಅದು ಒಂದು ಬಲೆ ಇದ್ದ ಹಾಗೆ.. ಕೊಸರಾಡಿದಷ್ಟೂ ಸಿಕ್ಕಿಹಾಕಿಕೊಳ್ಳೂವುದು ಜಾಸ್ತಿ... ನೀವು ಎಷ್ಟು ನಿಮ್ಮ activityಗಳನ್ನು ಬದಲುಮಾಡಬಯಸುತ್ತೀರೋ ಅಷ್ಟು ಅದು ಜಾಸ್ತಿ ಆಗುತ್ತದೆ... ಇದಕ್ಕೆ ಸರಿಯಾಗಿ suit ಆಗುವ ಥರ ನನ್ನ ಅಜ್ಜ ಹೇಳಿದ ಕತೆಯೊಂದು ನೆನಪಿಗೆ ಬರುತ್ತದೆ.. ತುಂಬಾ interesting ಆಗಿದೆ, ಕೇಳಿ..

*****

            ಹೀಗೇ ಒಬ್ಬ ಸನ್ಯಾಸಿ ಇದ್ದನು.. ಪ್ರಪಂಚದ ಆಗು ಹೋಗುಗಳಿಗೆ ಕಾರಣಗಳನ್ನು ತಿಳಿದುಕೊಳ್ಳಬೇಕೆಂದು ದಟ್ಟಾರಣ್ಯವೊಂದರಲ್ಲಿ ಹಲವು ವರ್ಷಗಳ ಕಾಲ ತಪಸ್ಸು ಮಾಡಿದನು.. ಯಾವತ್ತೋ ಒಂದು ದಿನ ತನಗೆ "ಸತ್ಯದ ಅರಿವಾಯಿತು, ಜಗತ್ತಿನ ಜೊತೆ ನಮ್ಮ ಸಂಭಂಧವೇ ಎಲ್ಲ ಆಗು ಹೋಗುಗಳ ಕಾರಣ... ನಾನು ಇವುಗಳನ್ನು ಹಚ್ಚಿಕೊಳ್ಳಬಾರದು.. ತಟಸ್ಥನಾಗಿರಬೇಕು.. ಎಲ್ಲವನ್ನು ಬಿಟ್ಟವನಾಗಬೇಕು" ಎಂದು ತೀರ್ಮಾನಿಸಿದ.. ಅಂತೂ ಇಂತೂ ಅವನ ಅರಣ್ಯವಾಸ ಮುಗಿಸಿ, ತಾನು "ಎಲ್ಲವನ್ನೂ ಬಿಟ್ಟ ಸನ್ಯಾಸಿ" ಎಂದುಕೊಂಡು ಊರಿಗೆ ಬಂದ...
            ಊರಿಗೆ ಬಂದರೆ ಆಯಿತಾ? ಇಲ್ಲ... ತನ್ನ 'ಮನುಷ್ಯ ಪ್ರಾಣಿ’ ಸಹಜ ಇಂಗಿತಗಳನ್ನು, ಉದಾಹರಣೆಗೆ ಹಸಿವು, ತೃಪ್ತಿಪಡಿಸಿಕೊಳ್ಳಲು ಮನುಷ್ಯರನ್ನು ಅವಲಂಬಿಸಲೇಬೇಕು.. ಸರಿ, ಮೊದಲನೇ ದಿನ ಭಿಕ್ಷೆ ಬೇಡುವುದಕ್ಕೆಂದು ಜನರ ಮನೆಗಳಿಗೆ ಹೋದ.. ಅವನು ಎಲ್ಲವನ್ನೂ ಬಿಟ್ಟವನು, ಹೇಗೆ ಹೋಗಿರಬಹುದು? ದುಂಡಗೆ ಹೋದ..
            ಆದರೆ ಊರಿನ ಜನಗಳು ಬಿಟ್ಟಾರೆಯೇ?? ತಮ್ಮ ತಮ್ಮ ಹೆಂಡತಿ, ಮಕ್ಕಳನ್ನು ರಕ್ಷಿಸಿಕೊಳ್ಳಲು ಅವನಿಗೆ ದುಂಡಗೆ ಬರಬಾರದೆಂದು ತಾಕೀತು ಮಾಡಿದರು...
            ಹೇಗಾದರೆ ಅವನಿಗೇನು? ಕಚ್ಚೆಯ ತುಂಡನ್ನು ಉಟ್ಟಿಕೊಳ್ಳಲು ಅವನಿಗೇನೂ ಅಭ್ಯಂತರವಿರಲಿಲ್ಲ.. ಎಲ್ಲಿಯೋ ಬಿದ್ದಿದ್ದ ಹರಕು ತುಂಡನ್ನು ಸುತ್ತಿಕೊಂಡು ಹೋದ.. ಇದು ಸ್ವಲ್ಪ ದಿನ ನಡೆಯಿತು... ಆದರೆ ಕೆಲವುದಿನಗಳ ನಂತರ ಆ ತುಂಡು ವಾಸನೆ ಬರಲು ಶುರುವಾಯಿತು... ಮತ್ತೆ ಊರವರ ತಕರಾರು.. ತೊಳೆದುಕೊಂಡು ಬರಬೇಕೆಂದು..
            ಸರಿ.. ಇನ್ನೊಂದನ್ನು ಮಾಡಿಕೊಂಡ.. ಒಂದನ್ನು ಉಟ್ಟಿಕೊಂಡು ಇನ್ನೊಂದನ್ನು ತೊಳೆದು ಬಿಸಿಲಿಗೆ ಒಣೆಸಿ ಹೋಗುತ್ತಿದ್ದ.. ಹೇಗೆ ಬದುಕಿದರೆ ಅವನಿಗೇನು??
            ಆದರೆ ಒಂದು ದಿನ ಬಿಸಿಲಿಗೆ ಹಾಕಿದ್ದ ಪಂಚೆಯನ್ನು ಒಂದು ಇಲಿ ಕಚ್ಚಿ ಹರಿದು ಹಾಕಿತು... ಹಾಗೇ, ಮುಂದಿನ ಪಂಚೆಗಳಿಗೂ ಇದೇ ಗತಿಯಾಯಿತು...
            ವಿಧಿಯಿಲ್ಲದೇ ಅವನಿಗೆ ಒಂದು ಬೆಕ್ಕನ್ನು ಸಾಕಬೇಕಾಯಿತು.. ಆಗ ಈಗಿನ ಕಾಲದ ಹಾಗೆ ’ಇಲಿ ಪಾಷಾಣ’ ಇರಲಿರಲಿಲ್ಲ.. ಆದರೆ ಆ ಬೆಕ್ಕೋ ಬೇರೆಯವರ ಮನೆಗೆ ಹೋಗಿ ಕಳ್ಳತನದಿಂದ ಹಾಲು ಕುಡಿದು, ಚೆಲ್ಲಿ ಬರುತ್ತಿತ್ತು.. ಮತ್ತೆ ಊರವರ ತಕರಾರು...
            ಸನ್ಯಾಸಿಗೆ ತಲೆ ಕೆಟ್ಟಿತು.. ಇವನು ತಿನ್ನುವ ಬೇಡಿದ ಅನ್ನಗಳನ್ನು ಬೆಕ್ಕು ತಿನ್ನುತಿರಲಿಲ್ಲ... ಹಾಗಾಗಿ ಒಂದು ಹಸುವನ್ನು ಯಾರದೋ ತಿಥಿಯಲ್ಲಿ ಸಂಪಾದಿಸಿ ತನ್ನ ತುಂಡನ್ನು ಒಣೆಸುವಲ್ಲಿ ಕಟ್ಟಿಹಾಕಿದ.. ಅದಕ್ಕೆ ಮಳೆ ಬಿಸಿಲು ತಾಗದಂತೆ ಅದಕ್ಕೊಂದು ಗೂಡನ್ನು ಕಟ್ಟಿಕೊಟ್ಟಿದ.. ಮಳೆ, ಗಾಳಿ, ಛಳಿಯಲ್ಲಿ ತಾನೂ ಅದರಲ್ಲೇ ಮಲಗತೊಡಗಿದ..
            ಆದರೆ ಈಗ ಹೊಸ ತಲೆನೋವು ಪ್ರಾರಂಭವಾಗಿತ್ತು.. ಹಸುವಿನ ಚಾಕರಿ ಮಾಡುವವರು ಬೇಕಾಗಿತ್ತು.. ಕೆಲಸದವರನ್ನು ಇಟ್ಟುಕೊಂಡ.. ಆದರೆ ಕೆಲಸದವರೋ ವಿಶ್ವಾಸದಿಂದ ಕೆಲಸ ಮಾಡಲಿಲ್ಲ.. ಕರು ಹಾಕಿದರೂ ಹಾಲು ಕೊಡದ ಹಸು ಅದು ಎಂದೇ ಅವನಿಗೆ ತಿಳಿ ಹೇಳಿ ಹಾಲನ್ನೆಲ್ಲ ಮನೆಗೊಯ್ದರು.. ಹೀಗಾಗಿ ನಂಬಿಕಸ್ತ ಜನರ ಅವಶ್ಯಕತೆ ಉಂಟಾಯಿತು..
            ಊರ ಹಿರಿಯರಲ್ಲಿ ದನ ಕರು ನೋಡಿಕೊಳ್ಳಲು ನಂಬಿಕಸ್ತ ಜನರನ್ನ ಸಂಪಾದಿಸುವುದು ಹೇಗೆ ಎಂದು ಕೇಳಿದ.. ಅವರು ತೆಗೆದ ಬಾಯಿಗೆ ’ಮದುವೆಯಾಗು, ಆ ಕೆಲಸಕ್ಕೆ ಹೆಂಡತಿಯೇ ಸಮ’ ಎಂದು ಹೇಳಿದರು.. (ಆಗಿನ ಕಾಲಕ್ಕಾದ್ದಕ್ಕೆ ನಡೆಯಿತು..) ಸರಿ, ಇವನೂ ಏನು ಮಾಡುವುದೆಂದು ಒಂದು ಮದುವೇ ಆಗೇ ಬಿಟ್ಟ..
            ಮದುವೆ ಆದ ಮೇಲೆ ಕೇಳಬೇಕೆ.. ಇಷ್ಟು ದಿನ ಸನ್ಯಾಸಿ ಬೇರೆ... ಮಕ್ಕಳು, ಮರಿ ಎಂದು...

*****

            ಹೇಗಿದೆ ಕಥೆ?? ಬಲ್ಬು ಹತ್ಕೊಂತಾ???



2 ಕಾಮೆಂಟ್‌ಗಳು: